Tuesday, January 11, 2011

ನನ್ನವಳು!

ಮಳೆಯಂತೆ ಗೆಳೆಯ
ನನ್ನವಳು
ಒಮ್ಮೊಮ್ಮೆ ಮಾತಲ್ಲಿ ಗುಡುಗು
ನಡೆಯಲ್ಲಿ ಮಿಂಚು
ಆದರೂ ಬಣ್ಣಿಸಲಾಗದ
ಬೆಡಗು

ನೀರಂತೆ ಗೆಳೆಯ
ನನ್ನವಳು
ಕೆರೆಯಲ್ಲಿರಲು ಪ್ರಶಾಂತ
ನದಿಯಲ್ಲಿರಲು ಭೊರ್ಗರೆತ
ಆದರೂ ಅವಳ ಮಾತೇ
ನನಗೆ ಸಂಗೀತ

ಪುಸ್ತಕದಂತೆ ಗೆಳೆಯ
ನನ್ನವಳು
ಎಲ್ಲವೂ ತೆರೆದಿಟ್ಟಂತೆ
ಖುಲ್ಲಾಂ ಖುಲ್ಲಾ
ಯಾರಾದೋ ಬೆನ್ನುಡಿ
ಇನ್ಯಾರದೋ ಮುನ್ನುಡಿ
ಆದರೂ ನನ್ನ ಹೆಸರೇ
ಅರ್ಪಣೆಯಲ್ಲಿ

ಬೆಳಕಂತೆ ಗೆಳೆಯ
ನನ್ನವಳು
ಹಗಲಲ್ಲಿ ಸುತ್ತುವಳು
ನನ್ನ ಸುತ್ತಲೂ
ಕತ್ತಲಲ್ಲಿ ನನ್ನೆದುರೆ
ಬೆತ್ತಲು

ಆದರೂ ಆಕೆ
ನನ್ನ ಬಾಳ ಭರವಸೆ ಬಾಗಿಲು
ಪ್ರೀತಿಯ ಮುಗಿಲು
ಎಲ್ಲದಕ್ಕಿಂತ ಮಿಗಿಲು

3 comments:

ಬಾನಾಡಿ said...

ತುಂಬಾ ಕಚಗುಳಿಯಿಡುವ ಸಾಲುಗಳು.
ಅಂದ ಹಾಗೆ ಯಾರವಳು?
ಒಲವಿನಿಂದ
ಬಾನಾಡಿ

ತಿಪ್ಪೇಸ್ವಾಮಿ ನಾಕೀಕೆರೆ said...

wav.... wav.... yaravalu geleya yaravalu

ಕನಸು.. said...

ಆರಂಭದ,ಅಂತ್ಯದ ಸಾಲುಗಳು ಇಷ್ಟವಾದವು..:)