ಸಾಕಷ್ಟು ಗೆಳೆಯ/ಗೆಳತಿಯರು ನನ್ನ ’ಅಟೋ’ಬಯೋಗ್ರಾಫಿ ಯಾವಾಗ ಬರುತ್ತೆ ಅಂತ ಮೆಸೇಜ್‌ಗಳ ಮೇಲೆ ಮೆಸೇಜ್ ಮಾಡಿ ಕೇಳುತ್ತಿದ್ದಾರೆ... ಅವರಿಗೆ ಸ್ವಲ್ಪ ದಿನದಲ್ಲಿ, ಇನ್ನೇನು ಬಂದೆ ಬಿಟ್ಟಿತು, ಒಂಚೂರು ಕಾಯಿರಿ ಎಂದು ಟೈಪಿಸಿ ಟೈಪಿಸಿ ನನಗೂ ಸುಸ್ತಾಗಿದೆ. ಆದರೂ ನಿಮ್ಮ ಪ್ರೀತಿಗೆ ನಾನು ಶರಣು ಹೇಳಲೇ ಬೇಕು. ನಿಮ್ಮ ಈ ಪ್ರೀತಿ ತಾನೆ ನನ್ನ ಪೆನ್ನನ್ನು, ಬರೆಯುವ ಮನಸ್ಸನ್ನು ಜೀವಂತವಾಗಿಟ್ಟಿರುವುದು! ಇನ್ನು ಕೆಲವರು ದಯಮಾಡಿ ನನ್ನ ಹೆಸರನ್ನು ಅಥವಾ ನಮ್ಮ ಬಗ್ಗೆ ಎಲ್ಲೂ ಬರೆಯಬೇಡ ಪ್ಲೀಸ್ ಎಂದಿದ್ದೀರಿ. ನನಗೆ ನಿಮ್ಮ ಸ್ಥಿತಿ ಅರ್ಥ ಆಗುತ್ತದೆ... ನಾನು ನನ್ನ ಹುಡುಗಿಯಷ್ಟು ಕಟುಕನ್ನಲ್ಲ! ನಾನು ಈ ಬರಹದಲ್ಲಿ ‘ಆದಷ್ಟು’ ಪ್ರಾಮಾಣಿಕವಾಗಿ ನನಗನಿಸಿದ್ದನ್ನು ಬರೆಯುವ ಪ್ರಯತ್ನ ಮಾಡಿದ್ದೇನೆ. ಮಾಡುತ್ತಿದ್ದೇನೆ. ಇದರರ್ಥ ನನ್ನ ಹಿಂದಿನ ಯಾವುದೇ ಬರಹಗಳಲ್ಲಿ ನಾನು ಪ್ರಾಮಾಣಿಕವಾಗಿರಲಿಲ್ಲ ಎಂದಲ್ಲ. ಇಲ್ಲಿನ ನನ್ನ ಅಭಿಪ್ರಾಯ ನೇರವಾಗಿ ನನ್ನ ಹೃದಯದಿಂದ ಬಂದಿರುವಂತದ್ದು... ಅದೇ ರೀತಿ ಇಲ್ಲಿ ನಾನು ಹೇಳುವ ಅಭಿಪ್ರಾಯಗಳೇ ನನ್ನ ನಿಲುವು, ಯೋಚನೆ ಮತ್ತು ಚಿಂತನೆಗಳ ಅಂತಿಮ ನಿಲ್ದಾಣವಲ್ಲ...
ನಾನು ಒಳ್ಳೆ ಹುಡುಗ ಎಂದು ಕರೆಸಿಕೊಂಡು ತಪ್ಪು ಮಾಡಿದೆ... ನಾನು ಎಷ್ಟೇ ಕೆಟ್ಟವನಾದರೂ ಕೂಡ ವರ್ಷಗಟ್ಟಳೆ ಶಿಕ್ಷೆ ಪಡೆಯುವ ಯಾವ ಕೆಲಸ ಕೂಡ ಮಾಡುತ್ತಿರಲಿಲ್ಲ... ಅದು ಗ್ಯಾರಂಟಿ... ಆದರೆ ಒಳ್ಳೆ ಹುಡುಗ ಎಂದು ಕರೆಸಿಕೊಂಡು 4 ವರ್ಷಗಳ ಕಾಲ ಅದೇಷ್ಟು ಹಿಂಸೆ ಪಟ್ಟಿಲ್ಲ...
‘ಆಟೋ’ಬಯೋಗ್ರಾಫಿ...
ಬರುತ್ತಿದೆ...
ಬರುತ್ತಲಿದೆ...
ಬಂದೇ ಬಿಟ್ಟಿತು...
ನೋಡ್ತಾ ಇರಿ ಏನೇನು ಬರೀತಿನಿಂತ...!
No comments:
Post a Comment