Monday, March 16, 2009

ಆದರೆ ಇದೇ ನೈಜ ಭಾರತವಲ್ಲ!

'ಸ್ಲಂ ಡಾಗ್ ಮಿಲಿಯನೇರ್' ಎಂಬ ಭಾರತೀಯರಿಗೆ ಹತ್ತಿರವಾದ ಸಾಮಾನ್ಯ ಸಿನಿಮಾವೊಂದು ಅಸಾಮಾನ್ಯ ತಿರುವು ಪಡೆದುಕೊಂಡು ಸಿನಿಮಿಯ ರೀತಿಯಲ್ಲಿ ಸಿನಿಮಾ ಕ್ಷೇತ್ರ ದ ಅತ್ಯುನ್ನತ ಪುರಸ್ಕರವಾದ ಅಸ್ಕರ್ ಪಡೆದುಕೊಂಡದ್ದು ನಿಮಗೆಲ್ಲರಿಗೂ ತಿಳಿದಿರುವಂತದ್ದೆ. ಅದರ ಹೊಗಳಿಕೆ ಅಥವಾ ತೆಗಳಿಕೆಗೆ ಈ ಲೇಖನವನ್ನು ನಾನು ಬಳಸುತ್ತಿಲ್ಲ. ಅದರ ಬದಲು ಈ ಚಿತ್ರದ ಬಗೆಗೆ ಬಂದ ಕೆಲವು ಅಭಿಪ್ರಾಯಗಳ ಹಿಂದಿರುವ ಮನಸ್ಥಿತಿಯ ಬಗೆಗೆ ಹೆಚ್ಚು ಗಮನ ಹರಿಸುತ್ತಿದ್ದೇನೆ. 'ಸ್ಲಂ ಡಾಗ್...' ಭಾರತದ ಕೊಳಕಿನ ಮೇಲೆ ಸುಂದರ ನೋಟ ಬೀರಿ ಅದನ್ನೇ ಎತ್ತಿ ಹಿಡಿದಿದೆ ಎಂದು ಒಂದು ವರ್ಗ ಹೇಳಿದರೆ ಮತ್ತೊಂದು ವರ್ಗ ಇದೇ 'ನೈಜ ಭಾರತ' ಎಂದಿತ್ತು. ಈ 'ನೈಜ ಭಾರತ'ವನ್ನು ಜಗತ್ತಿಗೆ ಪ್ರದಶರ್ಸಿದ್ದು ಅವರಿಗೆ ಅಮಿತಾನಂದವನ್ನುಂಟು ಮಾಡಿತ್ತು. ಅದರಲ್ಲೂ ಪ್ರತಿಷ್ಟಿತ ಅಸ್ಕರ್ ಪ್ರಶಸ್ತಿ ಬಂದದ್ದು ಅವರಿಗೆ ಸ್ವರ್ಗವನ್ನೇ ಭೂಮಿಗೆ ತಂದಿಟ್ಟಷ್ಟೆ ಖುಷಿ ಕೊಟ್ಟಿತ್ತು.ನಾನಂತು ಒಂದು ಮಾತನ್ನು ಇಲ್ಲಿ ಸ್ಪಷ್ಟ ಪಡಿಸುತ್ತೇನೆ. ನೈಜ ಭಾರತದಲ್ಲಿ ಈ ಸ್ಥಿತಿಯಿದೆ ಒಪ್ಪಿಕೊಳ್ಳುತ್ತೇನೆ. ಆದರೆ ಇದೇ ನೈಜ ಭಾರತವಲ್ಲ!ಇದೇ 'ನೈಜ ಭಾರತ' ಎಂದು ಪ್ರತಿಪಾದಿಸಿವವರಿಗೆ ಯಾವುದೋ ಸಿದ್ದಾಂತದ ಅಮಲೇರಿ ಕಣ್ಣು ಮಂಜಾಗಿದೆ ಎಂದು ಹೇಳದೆ ವಿಧಿಯಿಲ್ಲ.ಇದನ್ನೇ 'ನೈಜ ಭಾರತ' ಎಂದು ಹೇಳುವವರು 'ನೈಜತೆ'ಯನ್ನು ಅಳೆಯಲು ಯಾವ ಮಾನದಂಡ ಬಳಸಿಕೊಂಡಿದ್ದಾರೆ ಎಂದು ಮೊದಲು ಸ್ಪಷ್ಟಪಡಿಸಬೇಕು. ಭಾರತವನ್ನು ಯಾವುದೇ ಒಂದು ಮಾನದಂಡ ಬಳಸಿ ಅಳೆಯಲು ಸಾಧ್ಯವಿಲ್ಲ. ಯಾಕೆಂದರೆ ಭಾರತವೇ ಹಾಗಿದೆ ಮತ್ತು ಹಾಗಿರುವುದರಿಂದಲೇ ಇದು ಭಾರತವಾಗಿದೆ.
ಸ್ಲಂಗಳಲ್ಲಿನ ಬಡತನ ನೋಡಿ, ಭಾರತ ಬಡ ರಾಷ್ಟ್ರ ಎಂದು ಹೇಳುವುದಾದರೆ, ಅದನ್ನೇ ಬಂಡವಾಳವಾಗಿಸಿಕೊಂಡು ಸಿನಿಮಾ ಮಾಡುವುದಾದರೆ ಪಾಕಿಸ್ತಾನ, ಬಾಂಗ್ಲಾದೇಶ, ಅಪಘಾನಿಸ್ತಾನ, ಸೂಡನ್, ಇಥಿಯೋಪಿಯಾಗಳಲ್ಲೂ ಬಡತನವಿದೆ. ಅಲ್ಲಿನ ಕಥಾಹಂದರವಿಟ್ಟುಕೊಂಡು ಹಾಲಿವುಡ್ನವರು ಯಾಕೆ ಚಿತ್ರ ನಿಮರ್ಿಸುವುದಿಲ್ಲ? ಅಥವಾ ನಿಮರ್ಿಸಿದರೂ ಅದಕ್ಯಾಕೆ ಅಸ್ಕರ್ ಸಿಗುವುದಿಲ್ಲ? ಭಾರತದಲ್ಲಿ ತಮ್ಮ ತಮ್ಮ ಬಡತನವನ್ನು ಹೊಗಲಾಡಿಸಿಕೊಳ್ಳುವ ಅವಕಾಶವಾದರೂ ಜನರ ಮುಂದೆ ಇದೆ, ಅದರೆ ನಾ ಮೇಲೆ ಹೇಳಿದ ದೇಶಗಳಲ್ಲಿ? ಉತ್ತರ ಬೇಕಾಗಿದೆ.
ಭಾರತದಲ್ಲಿ ಕೋಮುಗಲಭೆಗಳಾಗುತ್ತವೆ ಎಂದು ಸಾಧಿಸುವ ಪ್ರಯತ್ನವನ್ನೂ ಕೂಡ ಈ ಸಿನಿಮಾ ಮಾಡುತ್ತದೆ ಅಂದರೆ ಜಗತ್ತಿನ ಬೇರೆಲ್ಲೂ ಕೋಮುಗಲಭೆಗಳಾಗುವುದಿಲ್ಲ ಎಂದು ಸಾರುವ ಯತ್ನವನ್ನೂ ನಾವಿಲ್ಲಿ ಕಾಣಬಹುದು. ಕೋಮು ಬಿಡಿ, ಮುಸ್ಲಿಂ ರಾಷ್ಟ್ರಗಳಲ್ಲಿ ಶಿಯಾ, ಸುನ್ನಿಗಳೆ ತಮ್ಮೊಳಗೆ ಕಚ್ಚಾಡುತ್ತಿದ್ದಾರೆ ವರ್ಷಕ್ಕೆ ಸಾವಿರಾರು ಜನ ಇದರಲ್ಲಿ ಹತರಾಗುತ್ತಾರೆ. ಅಲ್ಲೂ ಮಕ್ಕಳು ಅನಾಥರಾಗುತ್ತಾರೆ. ಈ ಬಗ್ಗೆ ಯಾಕೆ ಯಾರೂ ಚಿತ್ರ ನಿರ್ಸುತ್ತಿಲ್ಲ. ನಿಮರ್ಿಸಿದರೂ ಅದಕ್ಕೆ 'ಸ್ಲಂ ಡಾಗ್..'ಗೆ ಸಿಕ್ಕಷ್ಟು ಸುಲಭವಾಗಿ ಅಸ್ಕರ್ ಸಿಗುತ್ತಾ? ಅಸ್ಕರ್ ಸಿಕ್ಕರೆ ಈಗ 'ನೈಜ ಭಾರತ' ತೋರಿಸಲಾಗಿದೆ ಅನ್ನುವವರು ಆಗ 'ನೈಜ ಧರ್ಾಂಧತೆ' ತೋರಿಸಲಾಗಿದೆ ಎಂದು ಈಗಿನಷ್ಟೇ ಜೋರಾಗಿ ಹೇಳುತ್ತಾರಾ? ಉತ್ತರ ಬೇಕಾಗಿದೆ.
'ದ ವ್ಯೆಟ್ ಟ್ಯೆಗರ್', 'ಸ್ಲಂ ಡಾಗ್ ಮಿಲಿಯನೇರ್', 'ಫೈನಲ್ ಸೊಲ್ಯಷನ್' ಮುಂತಾದ ಪುಸ್ತಕ, ಸಿನಿಮಾ, ಸಾಕ್ಷ್ಯಚಿತ್ರಗಳು 'ನೈಜ ಭಾರತ'ವನ್ನು ತೋರಿಸಿವೆ ಎಂಬುದೆ ಅದರೆ 'ಲಗಾನ್', 'ಶಂಕರಾಭರಣಂ' ಮುಂತಾದ ಸಿನಿಮಾಗಳು 'ದ ಸ್ಟೋರಿ ಅಫ್ ಇಂಡಿಯಾ' ಮುಂತಾದ ಸಾಕ್ಷ್ಯಚಿತ್ರಗಳು ತೋರಿಸಿರುವುದು ಕಾಲ್ಪನಿಕ ಭಾರತವನ್ನಾ?
ಇನ್ನು ಕಾರಿನ ಭಾಗಗಳನ್ನು ಕದ್ದ ಆರೋಪದಲ್ಲಿ ಅದರ ಚಾಲಕ ಗ್ಯೆಡ್ ಆಗಿರೋ ಬಾಲಕನಿಗೆ ಥಳಿಸುವಾಗ, ಆ ಬಾಲಕ ಅಮೆರಿಕನ್ ದಂಪತಿಗಳಲ್ಲಿ 'ರಿಯಲ್ ಇಂಡಿಯಾ, ಹಿಯರ್ ಇಟ್ ಇಸ್' ಅಂದಾಗ ಅವರು ಹಣ ಕೊಟ್ಟು ಅತನನ್ನು ತಬ್ಬಿಕೊಂಡು 'ಹಿಯರ್ ಯು ಫೀಲ್ ರಿಯಲ್ ಅಮೇರಿಕ' ಅನ್ನುತ್ತಾಳಲ್ಲಾ ಆದರ ಬಗ್ಗೆ ಏನನ್ನುತ್ತೀರಿ? ಈ ಸಂಭಾಷಣೆ ಬಗ್ಗೆ ಯಾಕೆ ಜಾಣ ಕಿವು(ಕುರು)ಡುತನ? 'ನಾನು ಕರಿಯ, ನೀನು ಬಿಳಿಯ' ಎಂದು ಹೊಡೆದಾಡಿಕೊಂಡವರು ಯಾರಂತೆ? ಕತ್ರೀನಾ, ರೀಟಾ ಮುಂತಾದ ಹೆಸರಿನ ಚಂಡಮಾರುತಗಳು ಎದ್ದಾಗ 'ಸಿಕ್ಕಿದ್ದೆ ಸೀರುಂಡೆ' ಎಂದು ದರೋಡೆ ಮಾಡಿದವರು ಯಾರಂತೆ? 'ನೈಜ ಭಾರತ'ವನ್ನು ತೋರಿಸಲಾಗಿದೆ ಎಂದು ತಮ್ಮ ಬೆನ್ನು ತಟ್ಟಿಕೊಳ್ಳವವರು 'ಅವಾಸ್ತವ ಅಮೇರಿಕ'ವನ್ನು ತೋರಿಸಿರುವುದನ್ನು ಅಥವಾ ಅ ಬಗ್ಗೆ ಜಂಭ ಕೊಚ್ಚಿಕೊಂಡಿರುವುದನ್ನು ಯಾಕೆ ಪ್ರಶ್ನಿಸುವುದಿಲ್ಲ?
ಪ್ರತಿಯೊಬ್ಬರ ಮನೆಯಲ್ಲೂ ಒಂದಲ್ಲ ಒಂದು ಸಮಸ್ಯೆಯಿದ್ದೆ ಇರುತ್ತದೆ. ಸ್ಲಂ ಡಾಗ್ನಲ್ಲಿ 'ನೈಜ ಭಾರತ'ವಿದೆ ಎಂದವರ ಮನೆಯಲ್ಲೂ ಕೂಡ ಸಮಸ್ಯೆಗಳಿರಬಹುದು. ಅವರ ಸಮಸ್ಯೆಗಳನ್ನು ಇದೇ ರೀತಿ ನಾನು ಚಿತ್ರಿಸಿ ತೋರಿಸಿದರೆ ಇವರು ನಮ್ಮ ಮನೆಯ ನೈಜ ಪರಿಸ್ಥಿತಿ ತೋರಿಸಿದ್ದಾನೆ ಎಂದು ಅಭಿನಂದನ ಬರಹಗಳನ್ನು ಇದೇ ರೀತಿ ಬರೆಯುತ್ತಾರಾ? ಉತ್ತರ ಬೇಕಾಗಿದೆ.
ಭಾರತ ನನ್ನದು, ನನ್ನ ತಾಯಿ, ನನ್ನ ಸೋದರಿಯೆಂದು ಭಾವಿಸುವ ಯಾರೂ ಕೂಡ ಪರಕೀಯರೊಬ್ಬರು ಇಡೀ ದೇಶವನ್ನು ಅವಹೇಳನಕಾರಿಯಾಗಿ ಚಿತ್ರಿಸಿದನ್ನು ಒಪ್ಪಿಕೊಳ್ಳಲಾರರು. ಯಾಕೆಂದರೆ ಸಮಸ್ಯೆಗಳನ್ನು ಎತ್ತಿ ತೋರಿಸಲು, ಪರಿಹರಿಸಲು ಅದರದ್ದೆ ಯಾದ ಮಾರ್ಗವಿದೆ. ಅದಕ್ಕಾಗಿ ದೇಶದ ಮಾನ ಹರಾಜು ಮಾಡಬೇಕಾಗಿಲ್ಲ. ಈ ರೀತಿ ಒಂದು ಸಿನಿಮಾದ ಮೂಲಕ ದೇಶದ ಮಾನ ಹರಾಜು ಮಾಡಿವುದನ್ನು ಅವರು ಒಪ್ಪುದಾದರೆ ಅವರ ಸೋದರಿ, ತಾಯಿಯ ಸಮಸ್ಯೆಗೆ ಅಥವಾ ಅವರ ಮನೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅವರು ಇದೇ ದಾರಿ ಹಿಡಿಯಬಹುದು ಅಲ್ಲವೇ? ಉತ್ತರ ಬೇಕಾಗಿದೆ.
ಭಾರತದಲ್ಲಿನ ಸ್ಲಂ ಸಮಸ್ಯೆಗೆ ಸ್ಲಂ ನಿವಾಸಿಗಳು ಮತ್ತು ನಗರದತ್ತ ಓಡುತ್ತಿರುವ ಜನರೇ ಕಾರಣವೇ ಹೊರತು ಯಾವುದೇ ಕಾಣದ ಕೈಗಳಲ್ಲ.ಇಂದು ದಕ್ಷಿಣ ಕನ್ನಡದಲ್ಲಿ ಕೂಲಿ ಕಾಮರ್ಿಕರ ತೀವ್ರ ಅಭಾವವಿದೆ. ಅದರೆ ಇಲ್ಲಿನ ಎಷ್ಟು ಮಂದಿ ನಗರಗಳಲ್ಲಿ ಹೋಟೆಲ್, ಬಾರ್ಗಳಲ್ಲಿ ಗ್ಲಾಸ್ ತೊಳೆದುಕೊಂಡು ಜೀವನ ಸಾಗಿಸುತ್ತಿಲ್ಲ. 'ಪೇಟೆಯಲ್ಲಿ ಗ್ಲಾಸ್ ತೊಳೆದರೂ ಚಿಂತೆಯಿಲ್ಲ, ಕೃಷಿಗಾಗಿ ಹಾರೆ ಪಿಕ್ಕಾಸು ಹಿಡಿಯುದಿಲ್ಲ'ಯೆಂಬ ಅವರ ನಿಧರ್ಾರದ ಹಿಂದೆ 'ಸಕರ್ಾರ' ಇದೆಯಾ? ಈ ಬಗ್ಗೆ ಚಚರ್ಿಸಲು ಇದು ವೇದಿಕೆಯಲ್ಲ ಬಿಡಿ.
ಇನ್ನು, ಸ್ಲಂ ಡಾಗ್ನಲ್ಲಿ 'ನೈಜ ಭಾರತ'ವನ್ನು ಕಂಡವರು ಬಂಡವಾಳಶಾಹಿತ್ವದ ದೃಷ್ಟಿಕೋನದಿಂದ ಭಾರತವನ್ನು ಅಳೆದಿದ್ದಾರೆ ಎಂದೆನಿಸುತ್ತದೆ. ಅದರೆ ಅವರಲ್ಲಿ ಹೆಚ್ಚಿನವರು ಬಂಡವಾಳಶಾಹಿತ್ವದ ವಿರೋಧಿಗಳು! ಇಲ್ಲದಿದ್ದಲ್ಲಿ ಅವರು ಅಲ್ಲಿ ತೋರಿಸಿದ ಬಡತನಕ್ಕೆ ಅಷ್ಟು ಮರುಗುತ್ತಿರಲಿಲ್ಲ. ಇದೆಂಥಾ ಎಡಬಿಡಂಗಿತನ!
ಜಗತ್ತಿನಲ್ಲಿ ಅತಿಹೆಚ್ಚು ಮಾನಸಿಕ ರೋಗಿಗಳು ಇರುವುದು ಅಮೇರಿಕದಲ್ಲಿ! ಆ ಕಾರಣದಿಂದ ಅಮೇರಿಕವನ್ನು ಮಾನಸಿಕವಾಗಿ ಬಡ ರಾಷ್ಟ್ರ ಅನ್ನಬಹುದು. ಜಪಾನ್ನಲ್ಲಿ ಅತಿ ಹೆಚ್ಚಿನ ವಯೋವೃದ್ಧರಿದ್ದಾರೆ ಅದನ್ನು ಚೈತನ್ಯರಹಿತ ಬಡ ದೇಶ ಅನ್ನಬಹುದು. ಚೀನಾದಲ್ಲಿ ವಾಕ್ ಸ್ವಾತಂತ್ರ್ಯವೇ ಇಲ್ಲ ಅದ್ದರಿಂದ ಅದನ್ನು ಸ್ವಾತಂತ್ರ್ಯಕ್ಕೆ ಬಡತನವಿರುವ ದೇಶ ಅನ್ನಬಹುದು. ಐರೋಪ್ಯ ರಾಷ್ಟ್ರಗಳಿಗೆ ಸ್ವಂತದ್ದೆಂದು ಹೇಳಿಕೊಳ್ಳಲು ಅವರದ್ದೇ ಆದ ಸಂಸ್ಕ್ರತಿಯಿಲ್ಲ. ಅದ್ದರಿಂದ ಆ ದೇಶಗಳನ್ನು ಸಾಂಸ್ಕ್ರತಿಕವಾಗಿ ಬಡ ದೇಶಗಳು ಅನ್ನಬಹುದು. ಇನ್ನು ಹೆಚ್ಚಿನೆಲ್ಲ ಮುಸ್ಲಿಂ ದೇಶಗಳಲ್ಲಿ ಶಾಂತಿ ಮರೀಚಿಕೆಯಾಗಿದೆ. ಅದ್ದರಿಂದ ಅವುಗಳನ್ನು ಸಾಮಾಜಿಕವಾಗಿ ಬಡ ರಾಷ್ಟ್ರಗಳು ಅನ್ನಬಹುದು. ಅದ್ದರಿಂದ ಇವುಗಳೆಲ್ಲದರ ಬಗ್ಗೆ ಚಿತ್ರ ಮಾಡಬಹುದು. ಅದರೆ ಅಸ್ಕರ್ ಮತ್ತು ನೈಜತೆ ಅದಕ್ಕೆ ದಕ್ಕಬಹುದೇ?ಈ ಎಲ್ಲ ಬಹುದುಗಳನ್ನಿಟ್ಟುಕೊಂಡು ಅಥವಾ ಮಾನದಂಡಗಳನ್ನಿಟ್ಟುಕೊಂಡು ನಾವ್ಯಾಕೆ ಅವರನ್ನು ಹಿಯಾಳಿಸುತ್ತಿಲ್ಲ? ಈ ವಿಷಯಗಳಲ್ಲಿ ನಾವು ಅವರಿಗಿಂತ ಶ್ರೀಮಂತರಿದ್ದೇವೆ ಅಲ್ವಾ?
ಇಲ್ಲಿ ನಮಗೆ ಕಾಡುತ್ತಿರುವುದು ಕೀಳರಿಮೆ, ಬಂಡವಾಳಶಾಹಿತ್ವದ ವ್ಯಾಖ್ಯೆಗೆ ಒಳಪಟ್ಟ ಅಭಿವೃದ್ಧಿಯೆಂಬ ಪದ ಮತ್ತು ನಮ್ಮ ಹಿರಿಮೆಯನ್ನು ಅರಿಯದ ಕೆಲವು ಬಾಲಬಡುಕರು!
ಭಾರತದಲ್ಲಿನ 'ಸ್ಲಂ' ಸಮಸ್ಯೆ ಒಂದಲ್ಲ ಒಂದು ದಿನ ಪರಿಹಾರವಾಗಬಹುದು. ಆದರೆ, ಭಾರತದ ನೈಜ ಶಕ್ತಿ ಯಾವುದು ಎಂದು ಅರಿಯಾದೆ ಸಿಕ್ಕ ಸಿಕ್ಕ ಕಡೆ ದೇಶದ ವಿರುದ್ಧ ಅರಚುವ 'ಡಾಗ್' ಮತ್ತು ಭಾರತದ ನ್ಯೂನತೆಯನ್ನು ತೆಗಳಿ ಅದನ್ನೇ ಬಂಡವಾಳವಾಗಿಸಿಕೊಂಡು ಮಿಲಿಯನೇರ್ಗಳಾಗುವವರಿಂದ ಭಾರತಕ್ಕೆ ಎಂದು ಮುಕ್ತಿ.
ಉತ್ತರ ಬೇಕಾಗಿದೆ.

No comments: