Wednesday, March 25, 2009

ನಾವು ನಗರದತ್ತ... ನಮ್ಮ ಮುಂದಿನ ಪೀಳಿಗೆ ಹಳ್ಳಿಯತ್ತ...!?

ಭಾರತ ಗ್ರಾಮಗಳ ದೇಶವೆಂದು ಹೇಳುತ್ತಾ ಗ್ರಾಮ ಜೀವನವೇ ಶ್ರೇಷ್ಠ ಅನ್ನುವ ಪರಿಭಾಷೆ ನೀಡುವುದು ರಾಜಕಾರಣಿಗಳ ಮತ್ತು ದೇಶದ ಆರ್ಥಿಕತೆಗೆ ಸಂಬಂಧಪಟ್ಟ ಸಮ್ಮೇಳನಗಳಲ್ಲಿ ಸ್ವಾಗತ, ಧನ್ಯವಾದಗಳಿರುವಷ್ಟೇ ಕಡ್ಡಾಯವಾಗಿ ನಡೆದು ಬಂದ ’ಸಮಾರಂಭ ಪಾರಂಪರ್ಯ’ ಸಂಗತಿ. ಹಾಗೇ ಇದೆಯೇ? ಇಲ್ಲವೇ? ಅನ್ನುವುದು ಪಿಯಚ್.ಡಿ ಪಡೆಯಲು ಸಂಶೋಧನೆ ನಡೆಸುವವರಿಗೆ ’ಆಹಾರ’ವಾಗುವ ವಿಷಯ. ಅಲ್ಲಿಗೆ ’ದಿ ಎಂಡ್’.
ನಗರಕ್ಕೆ ಅಥವಾ ಸೌಲಭ್ಯಗಳಿರುವ ಪ್ರದೇಶಗಳಿಗೆ ವಲಸೆ ಹೋಗುವುದು ಅಥವಾ ಉದ್ಯೋಗ ಹುಡುಕಿಕೊಂಡು ಹೋಗುವುದು ಜಗತ್ತಿನ ಪ್ರತಿಯೊಂದು ದೇಶ ಮತ್ತು ನಾಗರಿಕತೆಯಲ್ಲಿ ನಡೆದು ಬಂದ ಸಹಜ ಮತ್ತು ಅಷ್ಟೇ ಅನಿವಾರ್ಯ ಪ್ರಕ್ರೀಯೆ. ಈ ಚಟುವಟಿಕೆಯ ಲಾಭವನ್ನು ನಾವೆಲ್ಲರೂ ಸಮನಾಗಿ ಪಡೆದಿದ್ದೇವೆಯಾದರೂ ಈ ಪ್ರಕ್ರೀಯೆಯಲ್ಲಿ ನಗರಕ್ಕೂ ಹಳ್ಳಿಗೂ ’ಅವಶ್ಯಕತೆ’ಯೆಂಬ ಕೊಂಡಿಯಿತ್ತು.
ಆದರೆ ಇದೀಗ ಅಂದರೆ ಕಳೆದ ಶತಮಾನದ ಮಧ್ಯಭಾಗದಿಂದ ಲೋಕದಾದ್ಯಂತ ಹೊಸದೊಂದು ತೆವಲು ಜನಮನದೊಳಗೆ ಹರಿಯಲಾರಂಭಿಸಿದೆ. ಅದೇ, "ನಗರದಲ್ಲಿದ್ದರೆ ಮಾತ್ರ ಜೀವನ ಪಾವನ, ಹಳ್ಳಿಗನ ಬಾಳು ದಾರುಣ, ಹೇಗಾದರೂ ಮಾಡಿ ಪಟ್ಟಣ ಸೇರಿಕೋ" ಎಂಬುದು. ನಗರ ಬದುಕಿನ ವಾಸ್ತವ ಚಿತ್ರಣ ಪಡೆಯದ ಕಲ್ಪನೆಗಳ ಭ್ರಮಾಧೀನ ಮನಸ್ಸಿನ ಅಡಿಯಾಳದ ಗ್ರಾಮೀಣ ಯುವ ಜನಾಂಗವಂತೂ ನಗರಕ್ಕೆ ಎದ್ದೇನೋ, ಬಿದ್ದೇನೊ ಎಂಬಂತೆ ಗುಳೇ ಹೊರಟೇ ಬಿಟ್ಟಿದೆ. "ಹಸಿದವನ ಮುಂದೆ ಉಪದೇಶ ಸಲ್ಲದು" ಎನ್ನುತ್ತಾರೆ ಹಿರಿಯರು. ಈ ಕಾರಣಕ್ಕೆ ಸಾಂಸ್ಕ್ರತಿಕ ವಿಷಯಗಳನ್ನು ಬಿಟ್ಟು ಆರ್ಥಿಕ ವಿಷಯಗಳಿಗೆಯೇ ಬರೋಣ.
ನಗರಗಳು ಆರ್ಥಿಕತೆಯ ಕೇಂದ್ರಬಿಂದು ಒಪ್ಪೊಣ, ಉದ್ಯೋಗದ ಸೆಲೆಗಳು ಅದೆಲ್ಲಾ ಸರಿ. ಆದರೆ ನಮ್ಮ ಯುವಕರು ಅಲ್ಲಿನ ಉದ್ಯೋಗವನ್ನೇ ಅವಲಂಬಿಸಿ ಬದುಕುವ ಭಿಕಾರಿತನವನ್ನೇಕೆ ಪ್ರದರ್ಶಿಸುತ್ತಿದ್ದಾರೆ? ಇದಕ್ಕೆ ಆರ್ಥಿಕ ಕಾರಣಗಳೊಂದಿಗೆ ಅವರ ಅಭಿಲಾಷೆಗಳು ನಗರ ಜೀವನದ ಥಳಕು ಬಳುಕಿನ ಸಂಸ್ಕ್ರತಿಯೊಂದಿಗೆ ತಳಕು ಹಾಕಿಕೊಂಡಿರುವುದೇ ಪ್ರಮುಖ ಕಾರಣವಾಗಿರಬಹುದೆಂಬುದು ನನ್ನ ಅನಿಸಿಕೆ.ನಗರಗಳಲ್ಲಿ ಉದ್ಯೋಗದ ಮತ್ತು ಹಣ ಮಾಡುವ ತರಹೇವಾರಿ ದಾರಿಗಳಿರಬಹುದು ಆದರೆ ಅದೆಲ್ಲದಕ್ಕಿಂತ ಹೆಚ್ಚು ಮಾರ್ಗ ಹಣ ಕಳೆದುಕೊಳ್ಳಲಿಕ್ಕಿದೆ. ಹಾಗೆಯೇ ಅಲ್ಲಿನ ಜೇವನ ವೆಚ್ಚವೂ ಅಧಿಕ. ಅದರೆ ಈ ಸತ್ಯದ ಕಡೆಗೆ ಅವರದ್ದು ಜಾಣ ಕಿವುಡು.
ನಾನೇನು ನಗರ ಕೇಂದ್ರಿತ ಉದ್ಯೋಗದ ದ್ವೇಷಿಯೇನು ಅಲ್ಲ, ನಗರ ಪ್ರದೇಶದಲ್ಲಿ ದೊರೆಯುವ ಕೆಲವೊಂದು ಉದ್ಯೋಗಗಳು ಗ್ರಾಮೀಣ ಹಿನ್ನೆಲೆಯ ಆರೋಗ್ಯವಂತ ಯುವಕರ ದಾರಿ ತಪ್ಪಿಸುತ್ತಿದೆಯೇನೋ ಎಂಬ ಅಳಕು ನನ್ನನ್ನು ತೀವ್ರವಾಗಿ ಕಾಡುತ್ತಿದೆ.ಗ್ರಾಮೀಣ ಪ್ರದೇಶದಲ್ಲಿ ತಮ್ಮವರೊಂದಿಗೆ ಅತ್ಮೀಯ ವಾತವಾರಣದಲ್ಲಿ ಒಂದಿಷ್ಟು ಶಾರೀರಿಕ ಶ್ರಮ ಬಯಸುವ ನೂರಾರು ಕೆಲಸಗಳಿದ್ದರೂ ಪಟ್ಟಣದ ಕಲುಷಿತ ವಾತವರಣದಲ್ಲಿ ಕಡಿಮೆ ಸಂಬಳಕ್ಕೆ ಅವಿರತವಾಗಿ ದುಡಿಯಬೇಕಾದ ಹೋಟೆಲ್ ಗಳ ಸಪ್ಲ್ಯೆಯರ್‍, ಮನೆಕೆಲಸ, ಗ್ಯಾರೇಜ್ ಗಳಲ್ಲಿನ ದುಡಿತ, ವಸತಿಗ್ರಹಗಳಲ್ಲಿನ ರೂಂ ಬಾಯ್, ಕಾರ್ಖಾನೆಗಳಲ್ಲಿನ ಕಾರ್ಮಿಕ ಮುಂತಾದ ಕೆಲಸಕ್ಕಾಗಿ ಮನೆ ಬಿಟ್ಟು ಪಟ್ಟಣ ಸೇರುವುದು ಯಾತಕ್ಕಾಗಿ? ಇದರ ಬದಲು ಗ್ರಾಮೀಣ ಭಾಗದಲ್ಲಿ ಅಳಿವಿನಂಚಿಗೆ ಸರಿಯುತ್ತಿರುವ ಮ್ರಣ್ಮಯ ಕಲೆ, ಬೆತ್ತದ ವಸ್ತುಗಳ ತಯಾರಿ, ಮರದ ಕೆತ್ತನೆ ಮುಂತಾದ ಉದ್ಯೋಗಗಳನ್ನು ಪರಿಶ್ರಮದಿಂದ ತಮ್ಮದಾಗಿಸಿಕೊಂಡು ಅದಕ್ಕೆ ತಮ್ಮತನದ ಸ್ಪರ್ಶ ನೀಡಿದರೆ ಭವ್ಯ ಭವಿಷ್ಯ ಆ ಕಲೆಗೂ, ಕಲಾಕಾರನಿಗೂ ಕಾದು ಕುಳಿತಿದೆ.
’ನಗರಗಳಲ್ಲಿ ಬಿಳಿಕಾಲರ್‍ ಜಾಬ್ ಸಿಗದಿದ್ದರೂ ಪರವಾಗಿಲ್ಲ, ಅಲ್ಲಿ ಭಿಕ್ಷೆ ಬೇಡಿಯಾದರೂ ಬದುಕುತ್ತೇನೆ. ಹಳ್ಳಿಯಲ್ಲಿ ಮಣ್ಣು ಮುಟ್ಟವ ಕೆಲಸ ಬೇಡವೇ ಬೇಡ " ಎಂದು ಶಪಥ ಮಾಡಿರುವವರು ನಗರಗಳತ್ತ ಕೆಲಸಕ್ಕಾಗಿ ಗುಳೆ ಹೊರಟವರು ಒಂದು ಮಾತನ್ನು ನೆನಪಿಟ್ಟುಕೊಳ್ಳುವುದು ಒಳಿತು, ಇದೀಗ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸಗಾರರು ಮತ್ತು ಅಲ್ಲಿನ ಸೊಗಡನ್ನು ಸಾಂಸ್ಕ್ರತಿಕ ಸೊಗಡನ್ನು ಉಳಿಸಿ ಪಸರಿಸುವವರ ತೀವ್ರ ಕೊರತೆ ಉದ್ಭವಿಸಿದ್ದು ಇನ್ನು ಕೆಲವೇ ವರ್ಷಗಳಲ್ಲಿ ಮುಂದಿನ ಪೀಳಿಗೆ ಹಳ್ಳಿಗಳನ್ನೇ ಕೆಲಸಕ್ಕಾಗಿ ಅವಲಂಬಿಸ ಬೇಕಾದ ಸ್ಥಿತಿ ಬರಬಹುದು. ಇದಕ್ಕಿಂತ ಮುಂಚೆ ನಾವು ಎಚ್ಚೆತ್ತು ನಗರ ಮತ್ತು ಹಳ್ಳಿಗಳ ಮಧ್ಯೆ ಒಂದು ’ಸಮತೋಲನ’ ಸ್ಥಿತಿ ನಿರ್ಮಾಣ ಮಾಡೋಣ ಅಲ್ಲವೇ?

Friday, March 20, 2009

SECURITY TO ELECTION

India is one of the great follower of true democracy. From our Independence we have had a bit of confusions in implementing the values of democracy but our democratic intention is always high. Democracy gets its shape through elections, so election is considered as life blood of any kind of democratic set up.
Election commission of India has already declared election schedules and its related activities and the whole nation is in the election mood.
In India election is not at all an easy task where the major threat to the election related procedures is the problem of security. As India is suffering from internal and external anti democratic forces like naxals, terroristsand other groups. These beast forces are ready to do anything to spoil the elections and so India is badly in need of high level security.
But unfortunately 20-20 cricket matches of IPL are organised at the same time and both of this events require high security. And therefore government of India should provide more protection to what is more important in the viewof the nation.And it is naturally election.
supirior than than their nation. For them cricket and money is more important than the safety of our country. Now a day’s security is one of the major problem as the terrrorists use modern weapons and ways to reach their target. We have only limited well trained forces and we can’t expect same level of security everywhere. A common man can easily understands this truth but unfortunately president of IPL, Lalith Modi can’t!
But the Government should concentrate towards providing security to electorate or election procedure not to IPL. If government turns its mind towards IPL matches that clearly indicates the theory of ‘government for the rich’ and there are chances that people of the nation loose their confidence in the system and they might revolt.

Monday, March 16, 2009

ಆದರೆ ಇದೇ ನೈಜ ಭಾರತವಲ್ಲ!

'ಸ್ಲಂ ಡಾಗ್ ಮಿಲಿಯನೇರ್' ಎಂಬ ಭಾರತೀಯರಿಗೆ ಹತ್ತಿರವಾದ ಸಾಮಾನ್ಯ ಸಿನಿಮಾವೊಂದು ಅಸಾಮಾನ್ಯ ತಿರುವು ಪಡೆದುಕೊಂಡು ಸಿನಿಮಿಯ ರೀತಿಯಲ್ಲಿ ಸಿನಿಮಾ ಕ್ಷೇತ್ರ ದ ಅತ್ಯುನ್ನತ ಪುರಸ್ಕರವಾದ ಅಸ್ಕರ್ ಪಡೆದುಕೊಂಡದ್ದು ನಿಮಗೆಲ್ಲರಿಗೂ ತಿಳಿದಿರುವಂತದ್ದೆ. ಅದರ ಹೊಗಳಿಕೆ ಅಥವಾ ತೆಗಳಿಕೆಗೆ ಈ ಲೇಖನವನ್ನು ನಾನು ಬಳಸುತ್ತಿಲ್ಲ. ಅದರ ಬದಲು ಈ ಚಿತ್ರದ ಬಗೆಗೆ ಬಂದ ಕೆಲವು ಅಭಿಪ್ರಾಯಗಳ ಹಿಂದಿರುವ ಮನಸ್ಥಿತಿಯ ಬಗೆಗೆ ಹೆಚ್ಚು ಗಮನ ಹರಿಸುತ್ತಿದ್ದೇನೆ. 'ಸ್ಲಂ ಡಾಗ್...' ಭಾರತದ ಕೊಳಕಿನ ಮೇಲೆ ಸುಂದರ ನೋಟ ಬೀರಿ ಅದನ್ನೇ ಎತ್ತಿ ಹಿಡಿದಿದೆ ಎಂದು ಒಂದು ವರ್ಗ ಹೇಳಿದರೆ ಮತ್ತೊಂದು ವರ್ಗ ಇದೇ 'ನೈಜ ಭಾರತ' ಎಂದಿತ್ತು. ಈ 'ನೈಜ ಭಾರತ'ವನ್ನು ಜಗತ್ತಿಗೆ ಪ್ರದಶರ್ಸಿದ್ದು ಅವರಿಗೆ ಅಮಿತಾನಂದವನ್ನುಂಟು ಮಾಡಿತ್ತು. ಅದರಲ್ಲೂ ಪ್ರತಿಷ್ಟಿತ ಅಸ್ಕರ್ ಪ್ರಶಸ್ತಿ ಬಂದದ್ದು ಅವರಿಗೆ ಸ್ವರ್ಗವನ್ನೇ ಭೂಮಿಗೆ ತಂದಿಟ್ಟಷ್ಟೆ ಖುಷಿ ಕೊಟ್ಟಿತ್ತು.ನಾನಂತು ಒಂದು ಮಾತನ್ನು ಇಲ್ಲಿ ಸ್ಪಷ್ಟ ಪಡಿಸುತ್ತೇನೆ. ನೈಜ ಭಾರತದಲ್ಲಿ ಈ ಸ್ಥಿತಿಯಿದೆ ಒಪ್ಪಿಕೊಳ್ಳುತ್ತೇನೆ. ಆದರೆ ಇದೇ ನೈಜ ಭಾರತವಲ್ಲ!ಇದೇ 'ನೈಜ ಭಾರತ' ಎಂದು ಪ್ರತಿಪಾದಿಸಿವವರಿಗೆ ಯಾವುದೋ ಸಿದ್ದಾಂತದ ಅಮಲೇರಿ ಕಣ್ಣು ಮಂಜಾಗಿದೆ ಎಂದು ಹೇಳದೆ ವಿಧಿಯಿಲ್ಲ.ಇದನ್ನೇ 'ನೈಜ ಭಾರತ' ಎಂದು ಹೇಳುವವರು 'ನೈಜತೆ'ಯನ್ನು ಅಳೆಯಲು ಯಾವ ಮಾನದಂಡ ಬಳಸಿಕೊಂಡಿದ್ದಾರೆ ಎಂದು ಮೊದಲು ಸ್ಪಷ್ಟಪಡಿಸಬೇಕು. ಭಾರತವನ್ನು ಯಾವುದೇ ಒಂದು ಮಾನದಂಡ ಬಳಸಿ ಅಳೆಯಲು ಸಾಧ್ಯವಿಲ್ಲ. ಯಾಕೆಂದರೆ ಭಾರತವೇ ಹಾಗಿದೆ ಮತ್ತು ಹಾಗಿರುವುದರಿಂದಲೇ ಇದು ಭಾರತವಾಗಿದೆ.
ಸ್ಲಂಗಳಲ್ಲಿನ ಬಡತನ ನೋಡಿ, ಭಾರತ ಬಡ ರಾಷ್ಟ್ರ ಎಂದು ಹೇಳುವುದಾದರೆ, ಅದನ್ನೇ ಬಂಡವಾಳವಾಗಿಸಿಕೊಂಡು ಸಿನಿಮಾ ಮಾಡುವುದಾದರೆ ಪಾಕಿಸ್ತಾನ, ಬಾಂಗ್ಲಾದೇಶ, ಅಪಘಾನಿಸ್ತಾನ, ಸೂಡನ್, ಇಥಿಯೋಪಿಯಾಗಳಲ್ಲೂ ಬಡತನವಿದೆ. ಅಲ್ಲಿನ ಕಥಾಹಂದರವಿಟ್ಟುಕೊಂಡು ಹಾಲಿವುಡ್ನವರು ಯಾಕೆ ಚಿತ್ರ ನಿಮರ್ಿಸುವುದಿಲ್ಲ? ಅಥವಾ ನಿಮರ್ಿಸಿದರೂ ಅದಕ್ಯಾಕೆ ಅಸ್ಕರ್ ಸಿಗುವುದಿಲ್ಲ? ಭಾರತದಲ್ಲಿ ತಮ್ಮ ತಮ್ಮ ಬಡತನವನ್ನು ಹೊಗಲಾಡಿಸಿಕೊಳ್ಳುವ ಅವಕಾಶವಾದರೂ ಜನರ ಮುಂದೆ ಇದೆ, ಅದರೆ ನಾ ಮೇಲೆ ಹೇಳಿದ ದೇಶಗಳಲ್ಲಿ? ಉತ್ತರ ಬೇಕಾಗಿದೆ.
ಭಾರತದಲ್ಲಿ ಕೋಮುಗಲಭೆಗಳಾಗುತ್ತವೆ ಎಂದು ಸಾಧಿಸುವ ಪ್ರಯತ್ನವನ್ನೂ ಕೂಡ ಈ ಸಿನಿಮಾ ಮಾಡುತ್ತದೆ ಅಂದರೆ ಜಗತ್ತಿನ ಬೇರೆಲ್ಲೂ ಕೋಮುಗಲಭೆಗಳಾಗುವುದಿಲ್ಲ ಎಂದು ಸಾರುವ ಯತ್ನವನ್ನೂ ನಾವಿಲ್ಲಿ ಕಾಣಬಹುದು. ಕೋಮು ಬಿಡಿ, ಮುಸ್ಲಿಂ ರಾಷ್ಟ್ರಗಳಲ್ಲಿ ಶಿಯಾ, ಸುನ್ನಿಗಳೆ ತಮ್ಮೊಳಗೆ ಕಚ್ಚಾಡುತ್ತಿದ್ದಾರೆ ವರ್ಷಕ್ಕೆ ಸಾವಿರಾರು ಜನ ಇದರಲ್ಲಿ ಹತರಾಗುತ್ತಾರೆ. ಅಲ್ಲೂ ಮಕ್ಕಳು ಅನಾಥರಾಗುತ್ತಾರೆ. ಈ ಬಗ್ಗೆ ಯಾಕೆ ಯಾರೂ ಚಿತ್ರ ನಿರ್ಸುತ್ತಿಲ್ಲ. ನಿಮರ್ಿಸಿದರೂ ಅದಕ್ಕೆ 'ಸ್ಲಂ ಡಾಗ್..'ಗೆ ಸಿಕ್ಕಷ್ಟು ಸುಲಭವಾಗಿ ಅಸ್ಕರ್ ಸಿಗುತ್ತಾ? ಅಸ್ಕರ್ ಸಿಕ್ಕರೆ ಈಗ 'ನೈಜ ಭಾರತ' ತೋರಿಸಲಾಗಿದೆ ಅನ್ನುವವರು ಆಗ 'ನೈಜ ಧರ್ಾಂಧತೆ' ತೋರಿಸಲಾಗಿದೆ ಎಂದು ಈಗಿನಷ್ಟೇ ಜೋರಾಗಿ ಹೇಳುತ್ತಾರಾ? ಉತ್ತರ ಬೇಕಾಗಿದೆ.
'ದ ವ್ಯೆಟ್ ಟ್ಯೆಗರ್', 'ಸ್ಲಂ ಡಾಗ್ ಮಿಲಿಯನೇರ್', 'ಫೈನಲ್ ಸೊಲ್ಯಷನ್' ಮುಂತಾದ ಪುಸ್ತಕ, ಸಿನಿಮಾ, ಸಾಕ್ಷ್ಯಚಿತ್ರಗಳು 'ನೈಜ ಭಾರತ'ವನ್ನು ತೋರಿಸಿವೆ ಎಂಬುದೆ ಅದರೆ 'ಲಗಾನ್', 'ಶಂಕರಾಭರಣಂ' ಮುಂತಾದ ಸಿನಿಮಾಗಳು 'ದ ಸ್ಟೋರಿ ಅಫ್ ಇಂಡಿಯಾ' ಮುಂತಾದ ಸಾಕ್ಷ್ಯಚಿತ್ರಗಳು ತೋರಿಸಿರುವುದು ಕಾಲ್ಪನಿಕ ಭಾರತವನ್ನಾ?
ಇನ್ನು ಕಾರಿನ ಭಾಗಗಳನ್ನು ಕದ್ದ ಆರೋಪದಲ್ಲಿ ಅದರ ಚಾಲಕ ಗ್ಯೆಡ್ ಆಗಿರೋ ಬಾಲಕನಿಗೆ ಥಳಿಸುವಾಗ, ಆ ಬಾಲಕ ಅಮೆರಿಕನ್ ದಂಪತಿಗಳಲ್ಲಿ 'ರಿಯಲ್ ಇಂಡಿಯಾ, ಹಿಯರ್ ಇಟ್ ಇಸ್' ಅಂದಾಗ ಅವರು ಹಣ ಕೊಟ್ಟು ಅತನನ್ನು ತಬ್ಬಿಕೊಂಡು 'ಹಿಯರ್ ಯು ಫೀಲ್ ರಿಯಲ್ ಅಮೇರಿಕ' ಅನ್ನುತ್ತಾಳಲ್ಲಾ ಆದರ ಬಗ್ಗೆ ಏನನ್ನುತ್ತೀರಿ? ಈ ಸಂಭಾಷಣೆ ಬಗ್ಗೆ ಯಾಕೆ ಜಾಣ ಕಿವು(ಕುರು)ಡುತನ? 'ನಾನು ಕರಿಯ, ನೀನು ಬಿಳಿಯ' ಎಂದು ಹೊಡೆದಾಡಿಕೊಂಡವರು ಯಾರಂತೆ? ಕತ್ರೀನಾ, ರೀಟಾ ಮುಂತಾದ ಹೆಸರಿನ ಚಂಡಮಾರುತಗಳು ಎದ್ದಾಗ 'ಸಿಕ್ಕಿದ್ದೆ ಸೀರುಂಡೆ' ಎಂದು ದರೋಡೆ ಮಾಡಿದವರು ಯಾರಂತೆ? 'ನೈಜ ಭಾರತ'ವನ್ನು ತೋರಿಸಲಾಗಿದೆ ಎಂದು ತಮ್ಮ ಬೆನ್ನು ತಟ್ಟಿಕೊಳ್ಳವವರು 'ಅವಾಸ್ತವ ಅಮೇರಿಕ'ವನ್ನು ತೋರಿಸಿರುವುದನ್ನು ಅಥವಾ ಅ ಬಗ್ಗೆ ಜಂಭ ಕೊಚ್ಚಿಕೊಂಡಿರುವುದನ್ನು ಯಾಕೆ ಪ್ರಶ್ನಿಸುವುದಿಲ್ಲ?
ಪ್ರತಿಯೊಬ್ಬರ ಮನೆಯಲ್ಲೂ ಒಂದಲ್ಲ ಒಂದು ಸಮಸ್ಯೆಯಿದ್ದೆ ಇರುತ್ತದೆ. ಸ್ಲಂ ಡಾಗ್ನಲ್ಲಿ 'ನೈಜ ಭಾರತ'ವಿದೆ ಎಂದವರ ಮನೆಯಲ್ಲೂ ಕೂಡ ಸಮಸ್ಯೆಗಳಿರಬಹುದು. ಅವರ ಸಮಸ್ಯೆಗಳನ್ನು ಇದೇ ರೀತಿ ನಾನು ಚಿತ್ರಿಸಿ ತೋರಿಸಿದರೆ ಇವರು ನಮ್ಮ ಮನೆಯ ನೈಜ ಪರಿಸ್ಥಿತಿ ತೋರಿಸಿದ್ದಾನೆ ಎಂದು ಅಭಿನಂದನ ಬರಹಗಳನ್ನು ಇದೇ ರೀತಿ ಬರೆಯುತ್ತಾರಾ? ಉತ್ತರ ಬೇಕಾಗಿದೆ.
ಭಾರತ ನನ್ನದು, ನನ್ನ ತಾಯಿ, ನನ್ನ ಸೋದರಿಯೆಂದು ಭಾವಿಸುವ ಯಾರೂ ಕೂಡ ಪರಕೀಯರೊಬ್ಬರು ಇಡೀ ದೇಶವನ್ನು ಅವಹೇಳನಕಾರಿಯಾಗಿ ಚಿತ್ರಿಸಿದನ್ನು ಒಪ್ಪಿಕೊಳ್ಳಲಾರರು. ಯಾಕೆಂದರೆ ಸಮಸ್ಯೆಗಳನ್ನು ಎತ್ತಿ ತೋರಿಸಲು, ಪರಿಹರಿಸಲು ಅದರದ್ದೆ ಯಾದ ಮಾರ್ಗವಿದೆ. ಅದಕ್ಕಾಗಿ ದೇಶದ ಮಾನ ಹರಾಜು ಮಾಡಬೇಕಾಗಿಲ್ಲ. ಈ ರೀತಿ ಒಂದು ಸಿನಿಮಾದ ಮೂಲಕ ದೇಶದ ಮಾನ ಹರಾಜು ಮಾಡಿವುದನ್ನು ಅವರು ಒಪ್ಪುದಾದರೆ ಅವರ ಸೋದರಿ, ತಾಯಿಯ ಸಮಸ್ಯೆಗೆ ಅಥವಾ ಅವರ ಮನೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅವರು ಇದೇ ದಾರಿ ಹಿಡಿಯಬಹುದು ಅಲ್ಲವೇ? ಉತ್ತರ ಬೇಕಾಗಿದೆ.
ಭಾರತದಲ್ಲಿನ ಸ್ಲಂ ಸಮಸ್ಯೆಗೆ ಸ್ಲಂ ನಿವಾಸಿಗಳು ಮತ್ತು ನಗರದತ್ತ ಓಡುತ್ತಿರುವ ಜನರೇ ಕಾರಣವೇ ಹೊರತು ಯಾವುದೇ ಕಾಣದ ಕೈಗಳಲ್ಲ.ಇಂದು ದಕ್ಷಿಣ ಕನ್ನಡದಲ್ಲಿ ಕೂಲಿ ಕಾಮರ್ಿಕರ ತೀವ್ರ ಅಭಾವವಿದೆ. ಅದರೆ ಇಲ್ಲಿನ ಎಷ್ಟು ಮಂದಿ ನಗರಗಳಲ್ಲಿ ಹೋಟೆಲ್, ಬಾರ್ಗಳಲ್ಲಿ ಗ್ಲಾಸ್ ತೊಳೆದುಕೊಂಡು ಜೀವನ ಸಾಗಿಸುತ್ತಿಲ್ಲ. 'ಪೇಟೆಯಲ್ಲಿ ಗ್ಲಾಸ್ ತೊಳೆದರೂ ಚಿಂತೆಯಿಲ್ಲ, ಕೃಷಿಗಾಗಿ ಹಾರೆ ಪಿಕ್ಕಾಸು ಹಿಡಿಯುದಿಲ್ಲ'ಯೆಂಬ ಅವರ ನಿಧರ್ಾರದ ಹಿಂದೆ 'ಸಕರ್ಾರ' ಇದೆಯಾ? ಈ ಬಗ್ಗೆ ಚಚರ್ಿಸಲು ಇದು ವೇದಿಕೆಯಲ್ಲ ಬಿಡಿ.
ಇನ್ನು, ಸ್ಲಂ ಡಾಗ್ನಲ್ಲಿ 'ನೈಜ ಭಾರತ'ವನ್ನು ಕಂಡವರು ಬಂಡವಾಳಶಾಹಿತ್ವದ ದೃಷ್ಟಿಕೋನದಿಂದ ಭಾರತವನ್ನು ಅಳೆದಿದ್ದಾರೆ ಎಂದೆನಿಸುತ್ತದೆ. ಅದರೆ ಅವರಲ್ಲಿ ಹೆಚ್ಚಿನವರು ಬಂಡವಾಳಶಾಹಿತ್ವದ ವಿರೋಧಿಗಳು! ಇಲ್ಲದಿದ್ದಲ್ಲಿ ಅವರು ಅಲ್ಲಿ ತೋರಿಸಿದ ಬಡತನಕ್ಕೆ ಅಷ್ಟು ಮರುಗುತ್ತಿರಲಿಲ್ಲ. ಇದೆಂಥಾ ಎಡಬಿಡಂಗಿತನ!
ಜಗತ್ತಿನಲ್ಲಿ ಅತಿಹೆಚ್ಚು ಮಾನಸಿಕ ರೋಗಿಗಳು ಇರುವುದು ಅಮೇರಿಕದಲ್ಲಿ! ಆ ಕಾರಣದಿಂದ ಅಮೇರಿಕವನ್ನು ಮಾನಸಿಕವಾಗಿ ಬಡ ರಾಷ್ಟ್ರ ಅನ್ನಬಹುದು. ಜಪಾನ್ನಲ್ಲಿ ಅತಿ ಹೆಚ್ಚಿನ ವಯೋವೃದ್ಧರಿದ್ದಾರೆ ಅದನ್ನು ಚೈತನ್ಯರಹಿತ ಬಡ ದೇಶ ಅನ್ನಬಹುದು. ಚೀನಾದಲ್ಲಿ ವಾಕ್ ಸ್ವಾತಂತ್ರ್ಯವೇ ಇಲ್ಲ ಅದ್ದರಿಂದ ಅದನ್ನು ಸ್ವಾತಂತ್ರ್ಯಕ್ಕೆ ಬಡತನವಿರುವ ದೇಶ ಅನ್ನಬಹುದು. ಐರೋಪ್ಯ ರಾಷ್ಟ್ರಗಳಿಗೆ ಸ್ವಂತದ್ದೆಂದು ಹೇಳಿಕೊಳ್ಳಲು ಅವರದ್ದೇ ಆದ ಸಂಸ್ಕ್ರತಿಯಿಲ್ಲ. ಅದ್ದರಿಂದ ಆ ದೇಶಗಳನ್ನು ಸಾಂಸ್ಕ್ರತಿಕವಾಗಿ ಬಡ ದೇಶಗಳು ಅನ್ನಬಹುದು. ಇನ್ನು ಹೆಚ್ಚಿನೆಲ್ಲ ಮುಸ್ಲಿಂ ದೇಶಗಳಲ್ಲಿ ಶಾಂತಿ ಮರೀಚಿಕೆಯಾಗಿದೆ. ಅದ್ದರಿಂದ ಅವುಗಳನ್ನು ಸಾಮಾಜಿಕವಾಗಿ ಬಡ ರಾಷ್ಟ್ರಗಳು ಅನ್ನಬಹುದು. ಅದ್ದರಿಂದ ಇವುಗಳೆಲ್ಲದರ ಬಗ್ಗೆ ಚಿತ್ರ ಮಾಡಬಹುದು. ಅದರೆ ಅಸ್ಕರ್ ಮತ್ತು ನೈಜತೆ ಅದಕ್ಕೆ ದಕ್ಕಬಹುದೇ?ಈ ಎಲ್ಲ ಬಹುದುಗಳನ್ನಿಟ್ಟುಕೊಂಡು ಅಥವಾ ಮಾನದಂಡಗಳನ್ನಿಟ್ಟುಕೊಂಡು ನಾವ್ಯಾಕೆ ಅವರನ್ನು ಹಿಯಾಳಿಸುತ್ತಿಲ್ಲ? ಈ ವಿಷಯಗಳಲ್ಲಿ ನಾವು ಅವರಿಗಿಂತ ಶ್ರೀಮಂತರಿದ್ದೇವೆ ಅಲ್ವಾ?
ಇಲ್ಲಿ ನಮಗೆ ಕಾಡುತ್ತಿರುವುದು ಕೀಳರಿಮೆ, ಬಂಡವಾಳಶಾಹಿತ್ವದ ವ್ಯಾಖ್ಯೆಗೆ ಒಳಪಟ್ಟ ಅಭಿವೃದ್ಧಿಯೆಂಬ ಪದ ಮತ್ತು ನಮ್ಮ ಹಿರಿಮೆಯನ್ನು ಅರಿಯದ ಕೆಲವು ಬಾಲಬಡುಕರು!
ಭಾರತದಲ್ಲಿನ 'ಸ್ಲಂ' ಸಮಸ್ಯೆ ಒಂದಲ್ಲ ಒಂದು ದಿನ ಪರಿಹಾರವಾಗಬಹುದು. ಆದರೆ, ಭಾರತದ ನೈಜ ಶಕ್ತಿ ಯಾವುದು ಎಂದು ಅರಿಯಾದೆ ಸಿಕ್ಕ ಸಿಕ್ಕ ಕಡೆ ದೇಶದ ವಿರುದ್ಧ ಅರಚುವ 'ಡಾಗ್' ಮತ್ತು ಭಾರತದ ನ್ಯೂನತೆಯನ್ನು ತೆಗಳಿ ಅದನ್ನೇ ಬಂಡವಾಳವಾಗಿಸಿಕೊಂಡು ಮಿಲಿಯನೇರ್ಗಳಾಗುವವರಿಂದ ಭಾರತಕ್ಕೆ ಎಂದು ಮುಕ್ತಿ.
ಉತ್ತರ ಬೇಕಾಗಿದೆ.

ನಾನ್ಯಕೆ ಬರೆಯುತ್ತೇನೆ?

ಕಳೆದ ಮೂರು ವರ್ಷದಿಂದಲ್ಲೂ ಈ ಪ್ರಶ್ನೆಗೆ ನನ್ನಲ್ಲಿ ಉತ್ತರ ಸಿಕ್ಕಿಲ್ಲ. ಮುಂದಿನ ನೂರು ವರ್ಷಕ್ಕೂ ಬಹುಶ: ಉತ್ತರ ಸಿಗಲಿಕ್ಕಿಲ್ಲ! ಸಿಕ್ಕರೆ ...? ಒಡನೆಯೇ ನಾ ಬರೆಯುವುದನ್ನು ನಿಲ್ಲಿಸಿ ಬಿಡುತ್ತೇನೆ ಅಷ್ಟೇ!

ನನ್ನ ಬರಹದಿಂದ ಇಡೀ ಜಗತ್ತನ್ನೇ ಬದಲಾಯಿಸುತ್ತೇನೆ ಎಂಬ ಭ್ರಮೆ ನನಗಿಲ್ಲ. ಅಥವಾ ಯಾರದೋ ಜೀವನದಲ್ಲಿ ಬದಲಾವಣೆ ತರುತ್ತೇನೆ ಎಂಬ ಅಶಾವಾದವೂ ನನಗಿಲ್ಲ. ಅದರೂ ನಾನು ಬರೆಯುತ್ತೇನೆ ಯಾಕೆಂದರೆ "ಈ ಜಗತ್ತಿನಲ್ಲಿ ನಾನಿದ್ದೇನೆ" ಅದೂ ಜೀವಂತವಾಗಿ! ಅರಳುವ ಹೂವಿಗೂ ಸ್ಪಂದಿಸಬೇಕು, ನರಳುವ ಜೀವಕ್ಕೂ ದನಿಯಾಗಬೇಕು; ಬಾನೆತ್ತರದಿಂದ ಧುಮ್ಮಿಕ್ಕಿ ನೆಲ ಸೇರಿ ಮಾಯಾವಾಗೋ ನೀರ ಹನಿಯನ್ನು ಕೂಡ ಒಂದು ಕಡೆ ಕಡೆದಿಡಬೇಕು. ಬ್ರಹತ್ತಾದ ಸಾಗರದಲ್ಲೂ ಅಂತದ್ದೇ ಹನಿಯನ್ನು ಹುಡುಕಬೇಕು: ಮಗುವಿನ ಕಣ್ಣಲ್ಲಿನ ಮುಗ್ದತೆ, ಅಜ್ಜನ ಸುಕ್ಕುಗಟ್ಟಿದ ಮೊಗದಲ್ಲಿ ಹೆಪ್ಪುಗಟ್ಡಿರುವ ಅನುಭವ ಇವೆಲ್ಲವನ್ನೂ ನಾನು ಸಮಾನವಾಗಿ ಗುರುತಿಸಬಲ್ಲೆ ಎಂದು ಜಗತ್ತಿಗೆ ತೋರಿಸಬೇಕು; ಹಳ್ಳಿ, ದಿಲ್ಲಿ ನನಗೆ ಬೇರೆಯಲ್ಲ ಅರಡನ್ನೂ ನಾ ಬಲ್ಲೆ ಮತ್ತು ’ಎಷ್ಟು ಚೆನ್ನಾಗಿ’ ಅರಿತಿದ್ದೇನೆ ಎಂಬುದನ್ನು ಜಗತ್ತಿಗೆ ತೆರೆದಿಡಬೇಕು ..ಹೀಗೆ ನನ್ನ ಬರವಣಿಗೆಗೆ ಇರುವುದು ಇಂಥದೇ ಕೆಲಸಕ್ಕೆ ಬಾರದ ಹಂಬಲಗಳು.ಇವುಗಳೆಡೆಯಲ್ಲಿ ಮುಂದೆ ಇನ್ನೂ ಕೆಲವು ಸಂಗತಿಗಳು ಸೇರಿಕೊಳ್ಳಬಹುದು ಯಾಕೆಂದರೆ ನಾನು ನಿಂತ ನೀರಾಗಿರಲು ಇಷ್ಡಪಡುವುದಿಲ್ಲ ನನ್ನ ಈ ಗುಣ ನನ್ನ ಬರಹಕ್ಕೂ ಅನ್ವಯಿಸುತ್ತದೆ. ಚಲನಶೀಲತೆಯನ್ನು ಅಹ್ವಾನಿಸಿಕೊಂಡೆ ನಾ ಮುಂದುವರುಯುತ್ತೇನೆ ಅದುದರಿಂದ ಈ ಬ್ಲಾಗ್ ನ ಓದುಗರು ನನ್ನಿಂದ ಯಾವುದೇ ಸಿದ್ಧ ಮಾದರಿಯನ್ನು ಹುಡುಕಬೇಡಿ ಅಥವಾ ಯಾವುದೇ ಪಂಥಕ್ಕೆ ನನ್ನನ್ನು ಕಲ್ಲು ಕಟ್ಟಿ ಹಾಕಬೇಡಿ ಇದು ನಿಮ್ಮಲ್ಲಿ ನನ್ನ ವಿನಮ್ರ ವಿನಂತಿ.
ಚಲನಶೀಲತೆ ಎಂದರೆ ಸ್ವೀಕಾರ, ಅಳವಡಿಕೆ, ಸ್ಪಂದನೆ ಇವೆಲ್ಲಕ್ಕಿಂತ ಹೆಚ್ಚಾಗಿ ಮುಕ್ತತೆ. ಓದುಗ ದೊರೆಗಳ ಅನಿಸಿಕೆ, ಅಭಿಪ್ರಾಯಗಳಿಗೆ ತೆರೆದೆದೆಯ ಸ್ವಾಗತ ....